ಸಂಪರ್ಕಿಸಿ @ 080 235 61628
 
  • English
 
  • English
 
  • ಮುಖಪುಟ
  • ನಮ್ಮ ಬಗ್ಗೆ
  • ನೀತಿಗಳು
  • ಯೋಜನೆಗಳು
  • ಕಾಯ್ದೆ
  • ಅಧಿಸೂಚನೆ
  • ಸುತ್ತೋಲೆ
  • ನಾಗರೀಕರು ಸನ್ನದು
  • ಗ್ಯಾಲರಿ
  • ಆರ್ ಟಿಐ
  • ಸಂಪರ್ಕಿಸಿ
 Siddaramaiah

ಶ್ರೀ ಸಿದ್ದರಾಮಯ್ಯ

ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

-->

ಶ್ರೀ. ಶಿವಾನಂದ ಪಾಟೀಲ್

ಶ್ರೀ. ಶಿವಾನಂದ ಪಾಟೀಲ್

ಮಾನ್ಯ ಜವಳಿ, ಕಬ್ಬು ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ. ಸಚಿವರು.

ಶ್ರೀ. ಶಿವಾನಂದ ಪಾಟೀಲ್

ಶ್ರೀ. ಶಿವಾನಂದ ಪಾಟೀಲ್

ಮಾನ್ಯ ಜವಳಿ, ಕಬ್ಬು ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ. ಸಚಿವರು.
ಕರ್ನಾಟಕ ಸರ್ಕಾರ

ಆನ್ಲೈನ್ ಅರ್ಜಿಗಳು

ಯೋಜನೆ ಲಾಗಿನ್
ಇಲಾಖೆಯ ಇ-ವಾರ್ತಾಪತ್ರ
ನೌಕರ ಲಾಗಿನ್
ಕ್ರೆಡಿಟ್ ಸಂಪರ್ಕಿತ ಕ್ಯಾಪಿಟಲ್ ಪ್ರೋತ್ಸಾಹಧನದ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕೈಮಗ್ಗ ಮತ್ತು ಜವಳಿ ಇಲಾಖೆಯು 1991-92 ನೇ ಸಾಲಿನಿಂದ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇಲಾಖೆಯ ಮುಖ್ಯ ಉದ್ದೇಶ ಕೈಮಗ್ಗ ಮತ್ತು ವಿದ್ಯುತ್‍ಮಗ್ಗ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ ಹಾಗೂ ಜವಳಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಬಂಡವಾಳ ಹೂಡುವುದಕ್ಕೆ ಮತ್ತು ಉದ್ಯೋಗ ಸೃಜನೆಗಾಗಿ ಉತ್ತೇಜಿಸಲಾಗುತ್ತಿದೆ. ಕರ್ನಾಟಕ ರಾಜ್ಯವು ಹೆಚ್ಚು ರೇಷ್ಮೆ ಉತ್ಪಾದಿಸುತ್ತಿದ್ದು ದೇಶದ ಶೇ.65ರಷ್ಟು ಪಾಲು ಕರ್ನಾಟಕದ್ದಾಗಿರುತ್ತದೆ. ಅದೇ ರೀತಿ ರಾಜ್ಯದಲ್ಲಿ ಹೆಚ್ಚು ಹತ್ತಿ ಉತ್ಪಾದನೆ ಮಾಡುತ್ತಿದ್ದು,ಸುಮಾರು 20.00 ಲಕ್ಷ ಬೇಲ್‍ಗಳ ಹತ್ತಿಯನ್ನು ವಾರ್ಷಿಕವಾಗಿ ಉತ್ಪಾದನೆಯಾಗುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯವು ಸಿದ್ದ ಉಡುಪು ಘಟಕಗಳಲ್ಲಿ ಭಾರತದ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟು ಸಿದ್ದ ಉಡುಪು ಉತ್ಪಾದನೆಯನ್ನು ಮಾಡುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಇಲ್‍ಕಲ್ ಸೀರೆಗಳನ್ನು 8ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಹಾಗೂ ಸೀರೆಗಳ ನೇಯ್ಗೆ ವೈಭವವನ್ನು ನಾವು ಈಗಲೂ ನೋಡಬಹುದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಕೈಮಗ್ಗ ಉತ್ಪನ್ನಗಳಾದ ಮೊಳಕಾಲ್ಮೂರು ಸೀರೆಗಳು, ಮೈಸೂರು ರೇಷ್ಮೆ ಸೀರೆಗಳು, ಇಳಕಲ್ ಸೀರೆಗಳು ಉಡುಪಿ ಕಾಟನ್ ಸೀರೆಗಳು ಮತ್ತು ಗುಳೇದಗುಡ್ಡದ ಕಣ ಇವುಗಳನ್ನು ಭೌಗೋಳಿಕ ಗುರುತಿಸುವಿಕೆಯಲ್ಲಿ ನೋಂದಣಿಯಾಗಿರುತ್ತದೆ. ರಾಜ್ಯದಲ್ಲಿ 40,000 ಕೈಮಗ್ಗಗಳು ಹಾಗೂ 1,20,000 ವಿದ್ಯುತ್‍ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯದ ಕಲ್ಮುರ್ಗಿಯಲ್ಲಿ ಎಂ.ಎಸ್.ಕೆ ಗಿರಣಿಯು 1885ರಲ್ಲಿ ಸ್ಥಾಪನೆಗೊಂಡು ಕರ್ನಾಟಕದ ಆಧುನಿಕ ಜವಳಿ ಕ್ಷೇತ್ರವನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ. ರಾಜ್ಯದಲ್ಲಿ ಈಗ ಪ್ರಪಂಚದ ಅತಿ ದೊಡ್ಡ ನೂಲಿನ ಗಿರಣಿಯು 2,11,584 ರಾಟೆಗಳನ್ನು ಹೊಂದಿರುವ ಘಟಕವು ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಮೆ:ಶಾಹಿ ಎಕ್ಸ್‍ಪೋರ್ಟ್ ಲಿಮಿಟೆಡ್ ಕಂಪೆನಿಯು 52 ಸಿದ್ದ ಉಡುಪು ಘಟಕಗಳನ್ನು ಸ್ಥಾಪಿಸಿ ಸುಮಾರು 1,00,000 ಜನರಿಗೆ ಉದ್ಯೋಗವಕಾಶ ಕಲ್ಪಿಸಿರುತ್ತಾರೆ. ಕರ್ನಾಟಕ ರಾಜ್ಯವು ಜವಳಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಶಸ್ತ್ಯ ತಾಣವಾಗಿದೆ.

 
ಇಲಾಖೆಯ ಯೋಜನೆಗಳು

  • ನೂತನ ಜವಳಿ ನೀತಿ 2019-24
  • ಕೈಮಗ್ಗ ವಲಯ ಯೋಜನೆಗಳು
  • ವಿದ್ಯುತ್‍ಮಗ್ಗ ವಲಯ ಯೋಜನೆಗಳು
  • ಸಹಕಾರಿ ಸಂಘಗಳ ಯೋಜನೆಗಳು
 
 

ತ್ವರಿತ ಸಂಪರ್ಕಗಳು

  • ಇಲಾಖೆಯ ಟೆಂಡರ್‍ಗಳು
  • ಸಾರ್ವಜನಿಕ ವಿಚಾರಣೆ
  • ನಕ್ಷೆಗಳು & ದಿಕ್ಕುಗಳು
  • ಪ್ರವಾಸಿ ಮಾಹಿತಿ
  • ಮಾಹಿತಿ ಹಕ್ಕು ಅಧಿನಿಯಮು
  • ನಿಗಮಗಳು & ಸಂಸ್ಥೆಗಳು
  • ಇಲಾಖೆಗೆ ಸಂಬಂಧಿಸಿದ  ಸಂಪರ್ಕಗಳು
  • ಇಲಾಖೆಯ ನಕ್ಷೆ
 
ನಮ್ಮ ಬಗ್ಗೆ
  • ಸಂಸ್ಥೆಯು ನಕ್ಷೆ
  • ಇಲಾಖೆಗೆ ಸಂಬಂಧಿತ ಕೊಂಡಿಗಳು
ಮಾಹಿತಿ
  • ಜವಳಿ ದತ್ತಾಂಶ
  • ದೂರವಾಣಿ ಡೈರೆಕ್ಟರಿ
  • ಅಂಕಿಅಂಶಗಳು
  • ವಿಷನ್ 2020
  • ದಾಖಲೆಗಳು
ಇಲಾಖೆ
  • ಮಾಸಿಕ ಪ್ರಮುಖ ಚಟುವಟಿಕೆಗಳು
  • ಪ್ರಶಂಸಾಪತ್ರಗಳು
ಸಂಪರ್ಕಿಸಿ
  • ನಕ್ಷೆ ಮತ್ತು ದಿಕ್ಕುಗಳು
  • ಅರ್ಜಿ ಡೌನ್‍ಲೋಡ್ ಮಾಡಿ
 
© Department of Textiles & Handlooms Govt of Karnataka.
Webmasters : AIKYA